20 May, 2009

ಕಾಂಕ್ರೀಟ್ ಕಾನನದ ಕೋಗಿಲೆ

ಹಾಡೆಲೆ ಕೋಗಿಲೆ ಕೂಗೆಲೆ ಕೋಗಿಲೆ
ಸುಮಧುರ ಕಂಠದಿ ಕೂಗೆಲೆ ಕೋಗಿಲೆ

ಚೈತ್ರ ಮಾಸ ಬಂದಾಗ
ವಸಂತ ಋತು ಬಂದಾಗ
ಹಾಡುತ್ತಾ ಕೂಗುತ್ತಿದ್ದ ಕೋಗಿಲೆ

ಚಿಗುರೆಲೆಗಳ ನಡುವೆ
ಮರಗಿಡಗಳ ನಡುವೆ
ಹಾಡುತ್ತಾ ಕೂಗುತ್ತಿದ್ದ ಕೋಗಿಲೆ

ಸಂಪಿಗೆ ಮರದ ಮೇಲೆ
ಮಾಮರದ ಕೊಂಬೆ ಮೇಲೆ
ಹಾಡುತ್ತಾ ಕೂಗುತ್ತಿದ್ದ ಕೋಗಿಲೆ

ನೀ ಸುಮಧುರವಾಗಿ ಹಾಡುವೆ
ದಣಿದ ಮನಕೆ ಮುದ ನೀಡುವೆ
ಹಾಡೆಲೆ ಕೂಗೆಲೆ ಕೋಗಿಲೆ

ಕಾಂಕ್ರೀಟ್ ಕಾನನದ ನಡುವೆ
ಅಳಿದುಳಿದ ಮರಗಳ ಮೇಲೆ
ಹಾಡೆಲೆ ಕೂಗೆಲೆ ಕೋಗಿಲೆ

ಮರಗಳು ಉಳಿಯುವುದೆಷ್ಟು ದಿನವೋ
ಮರಗಳ ಜಾಗದಿ ಗಗನಚುಂಬಿ ಬರಲಿವೆಯೋ
ಈಗಲೇ ಹಾಡೆಲೆ ಕೂಗೆಲೆ ಕೋಗಿಲೆ

(2-7-2007)


2 comments: