ಟ್ರಿಣ್ ಟ್ರಿಣ್...... ಟ್ರಿಣ್ ಟ್ರಿಣ್...... ಟ್ರಿಣ್ ಟ್ರಿಣ್ ...... ಎಂದು ಶಬ್ಧ ಬಂದ ಕೂಡಲೇ ಮನೆಯಲ್ಲಿದ್ದವರೆಲ್ಲರ ಕಿವಿ ಜಾಗೃತವಾಗುತ್ತಿತ್ತು. ಕಾರಣ ಮನೆಯ ದೂರವಾಣಿ. ನಾ ಮೊದಲು ತಾ ಮೊದಲು ಎಂದು ಎಲ್ಲರೂ ಅದರ ಕಡೆಗೆ ಓಡುವವರೇ. ಆದರೆ ಈಗ ಹಾಗಲ್ಲ. ಎಲ್ಲರ ಕೈಯ್ಯಲ್ಲೂ ಮೊಬೈಲ್. ಮನೆಯ landlineಗೆ ಇರುವ ಕಪ್ಪು ಬಾಲ ಇದಕ್ಕಿಲ್ಲ. ಬಂದ ಹೊಸತರಲ್ಲಿ ತುಂಬಾ ಗಟ್ಟಿಮುಟ್ಟಾದ ದೇಹವನ್ನೂ ತಲೆಯ ಮೇಲೆ ಕೋಡೊಂದು ಇತ್ತು. ಆದರೆ ಈಗ ಅವು ಇಲ್ಲ. ಮೊಬೈಲ್ ಬಂದ ಹೊಸತರಲ್ಲಿ Outgoing callಗೆ 16ರೂ ಮತ್ತು Incoming callಗೆ 8ರೂ ಇತ್ತಂತೆ. (ನನಗೂ ಸರಿಯಾಗಿ ಗೊತ್ತಿಲ್ಲ). ಆದರೆ ಈಗ incoming free. ಅಷ್ಟೇನು ಕೆಲವೊಮ್ಮೆ outgoing ಕೂಡ. ನೂರಾರೇನು ಸಾವಿರಾರು smsಗಳು ಬಿಟ್ಟಿ. ಈಗಿನ handsetಗಳೋ..... ಅಷ್ಟು ಸಣ್ಣ ಪೆಟ್ಟಿಗೆಯಲ್ಲಿ ಏನೆಲ್ಲಾ ಇರುತ್ತೋ ಮೊಬೈಲ್ ಗೇ ಗೊತ್ತು.
ಮೊಬೈಲ್ ಬಗ್ಗೆ ಈಗ ಎಲ್ಲರಿಗೂ ಗೊತ್ತಿರೋದ್ರಿಂದ ಅದರ ಬಗ್ಗೆ ಜಾಸ್ತಿ ಹೇಳಲ್ಲ..... ಅಲ್ಲ ಟೈಪ್ ಮಾಡಲ್ಲ. ಕಾಲೇಜುಗಳಿಗೆ ಮೊಬೈಲ್ ತೆಗೆದುಕೊಂಡು ಹೋಗಬಾರದು ಎಂಬ ಕಾನೂನು ಇದೆಯಷ್ಟೆ. ಆದರೆ ಕಾಲೇಜು ಓದುವವರ 90% ಎಲ್ಲರ ಬಳಿ ಮೊಬೈಲ್ ಇರುತ್ತದೆ.......
ಛೆ........ ಛೆ...... ನಾನು ನನ್ನ ಮೊಬೈಲ್ ಕತೆ ಹೇಳಬೇಕೆಂದಿದ್ದೆ. ಕತೆಗಿಂತ ಪೀಠಿಕೆನೇ ಜಾಸ್ತಿ ಆದ್ಹಂಗೆ ಇದೆ. ಇರಲಿ. ಈಗ ನನ್ನ ಮೊಬೈಲ್ ಕತೆ ಶುರು ಹಚ್ಕೋತೀನಿ. ನಿಮ್ಮ ತಲೆ ಕೆಟ್ಟು ಹೋಗಲ್ಲ ತಾನೇ?!
ನನ್ನ ಅಣ್ಣ engineeringಗೆ ಬಂದ ಮೇಲೆ ಒಂದು sim ಕೊಂಡುಕೊಂಡಿದ್ದನು. ಅದಕ್ಕೆ ಒಂದು handset ಬೇರೆ ಇತ್ತು. ನಾನು I PUCಗೆ ಬರುವ ಒಂದು ತಿಂಗಳು ಮೊದಲು ಮತ್ತೊಂದು sim (student plan) ಕೊಂಡನು. ಅದಕ್ಕೊಂದು handset ಬೇಕಲ್ಲವೇ? ಮನೆಯಲ್ಲಿ ಯಾವುದೋ ಮೂಲೆಯಲ್ಲಿ ಏನಿಲ್ಲವೆಂದರೂ 10 ವರುಷ ಹಳೆಯದಾದ handset ಇತ್ತು. (Nokia 3330!) ಅದು sim valent ಮೊಬೈಲ್ ಆಗಿತ್ತು. ಈ free simಗೆ ಒಂದು handset ಬೇಕಿತ್ತು. ಹಾಗಾಗಿ handset-sim bond ಉಂಟಾಯಿತು. 2-3 ತಿಂಗಳು ಈ ಮೊಬೈಲೆ ಮನುಷ್ಯ ಸುಮ್ಮನೆ ಕೆಲಸವಿಲ್ಲದೆ ಬಿದ್ದಿತ್ತು. ನನಗೆ ಅದರ ಮೇಲೆ ಕರುಣೆ ಉಂಟಾಗಿ ಕೆಲಸ ಕೊಡಬೇಕೆನಿಸಿತು. "ಈ ಜಂಗಮ ಗಂಟೆಯನ್ನು ಇನ್ನು ಮುಂದೆ ನಾನು ಉಪಯೋಗಿಸುತ್ತೇನೆ" ಎಂದು ಘೋಷಿಸಿದೆ.
ಆದರೆ ಅದು ಗೃಹಬಂಧನದಲ್ಲಿ ಇತ್ತು. 2009ರಲ್ಲಿ ಸರಿಯಾಗಿದ್ದವನಿಗೆ 2010 ಕಾಲಿಡುತ್ತಿದ್ದಂತೆಯೇ ಯಾವುದೋ ರೋಗ ಈ handsetಗೆ ಹಿಡಿಯಿತು. ಮೊಬೈಲ್ ಗೆ ಮೊಬೈಲ್ ಜ್ವರ ಹಿಡಿಯಿತೇನೋ. ವಿಚಿತ್ರವಾದ ರೋಗ. ಅದರ ಲಕ್ಷಣಗಳು ಹೀಗಿತ್ತು. Call ಬಂದಾಗ ಎತ್ತಿದರೆ switch off! ಮತ್ತೆ ON ಮಾಡಿದರೆ Battery Full! ಹೌದು Charge Full ಎಂದು ತೋರಿಸಿದರೂ Phone ಬಂದ ಕೂಡಲೇ ಪ್ರಜ್ಞೆ ಕಳೆದುಕೊಳ್ಳುತ್ತಿತ್ತು. ಕೆಲವೊಮ್ಮೆ ಮೂರು-ನಾಲ್ಕು ಬಾರಿ switch ON ಮಾಡಬೇಕಾಗುತ್ತಿತ್ತು. ON ಮಾಡಿದ ಕೂಡಲೇ OFF ಆಗುತ್ತಿತ್ತು! ಹೀಗೆ ನಾಲ್ಕೈದು ಬಾರಿ ಒಮ್ಮೊಮ್ಮೆ ಏಳೆಂಟು ಬಾರಿ ON ಮಾಡಿ, CURRENT SHOCK! ಕೊಟ್ಟಮೇಲೆ ಪ್ರಜ್ಞೆ ಬರುತ್ತಿತ್ತು. ಈ ರೋಗಿಯು ಯಾವಾಗಲೂ ICUನಲ್ಲೇ ಇರುತ್ತಿತ್ತು. ಮೂರು-ನಾಲ್ಕು message ಬಂದರೆ ಪುನಃ comaಗೆ ಹೋಗುತ್ತಿದ್ದ ಪಾಪಾತ್ಮ. ಅಲ್ಲ ಮೊಬೈಲಾತ್ಮ. ಅಬ್ಬಬ್ಬ ಸಾಕಾಗಿ ಹೋಗಿತ್ತು. ಎಷ್ಟಾದರೂ ಹತ್ತು ವರುಷದ ಮುದುಕನಲ್ಲವೇ?
ಅಂತು ಇಂತು ಈ ಮೊಬೈಲ್ ಸಾಕಾಗಿ ಒಂದು ಹೊಸ handset ಕೊಂಡುಕೊಳ್ಳುವುದೆಂದು ತೀರ್ಮಾನವಾಯಿತು. ಇನ್ನೆಷ್ಟು ದಿನ ಅಂತ ICUನಲ್ಲಿಡುವುದು? ನಾನೂ, ನನ್ನಣ್ಣನೂ ಅದರ ಮಾರಣಹೋಮ ಮಾಡುವುದೆಂದು ನಿರ್ಧಸಿದೆವು. ಟಪ್! ಎಂದು ಶಬ್ದ. ಮೊಬೈಲ್ ಕೈತಪ್ಪಿ ಬಿದ್ದದ್ದಲ್ಲ. ನಾವೇ ಒಂದು-ಒಂದೂವರೆ ಮೀಟರ್ ಎತ್ತರದಿಂದ ಕೆಳಕ್ಕೆ ಹಾಕಿದೆವು.ಈ ಮೊಬೈಲಾತ್ಮ ಸತ್ತೇ ಇಲ್ಲ! Fracture ಏನು ಗಾಯವೂ ಆಗಿಲ್ಲ! ಮರಳಿ ಯತ್ನವ ಮಾಡು ಎಂಬಂತೆಪುನಃ ಪ್ರಯತ್ನಿಸಿದೆವು.ಊಹುಂ. ಈತ ತಂಬಾ ಗಟ್ಟಿಗ. ಆದರೂ ವಿಚಿತ್ರ ಪ್ರಾಣಿ. ಸಾಯುವುದೂ ಇಲ್ಲ, ಸರಿಯಾಗಿ ಬದುಕುವುದೂ ಇಲ್ಲ.ತ್ರಿಶಂಕು ಸ್ವರ್ಗದಂತೆ ತನಗೂ ತನ್ನದೇ ಆದ ಸ್ವರ್ಗ (ನಮಗೆ ನರಕ) ಬೇಕೆಂದು ಮಧ್ಯದಲ್ಲಿ ಹೋರಾಡುತ್ತಿತ್ತು. ಹೀಗೆ ಏಳೆಂಟು ಬಾರಿ ಬಿದ್ದ ಮೇಲೆ ಐದು ತುಂಡಾಯಿತು. ಮನುಷ್ಯನ ಕೈಕಾಲು ಮುರಿದರೂ ಜೀವ ಇರುವುದಿಲ್ಲವೇ? ಹಾಗೆಯೇ ಇದೂ ಕೂಡ. ತುಂಡುಗಳನ್ನೆಲ್ಲ ಪುನಃ ಜೋಡಿಸಿದೆ. ನೋಡೋಣವೆಂದು power button ಒತ್ತಿದೆ. ಮೊಬೈಲಾತ್ಮ ಜೀವಂತವಾಗಿದ್ದ! ನನ್ನಣ್ಣನಿಗೆ ಸಿಟ್ಟು ಬಂದು ಸಾಯಿ ಎಂದು ಮತ್ತೆ ಪ್ರಪಾತಕ್ಕೆ ಹಾಕಿದ. ಊಹುಂ. ಗಟ್ಟಿಗ ನಾಲ್ಕಾರು ಬಾರಿ ಬಿದ್ದ ಮೇಲೆ ಮತ್ತೆ ತುಂಡಾಯಿತು. ಜೋಡಿಸಿದಾಗ ON ಆಯಿತು.ಹೀಗೆ ಹಲವು ಬಾರಿ ಮಾಡಿದೆವು. ಕೊನೆಗೆ ಸಾಕಾಗಿ ಒಂದು ಮೂಲೆಯಲ್ಲಿ ಹಾಕಿದೆ.
ಹೊಸ handset ಬಂದ ಮೇಲೆ ಒಂದು ದಿನ ನೋಡೋಣವೆಂದು ON ಮಾಡಿದೆ. ಆಗಲಿಲ್ಲ. ಸತ್ತೇ ಹೋಯಿತೆಂದು ನಿರ್ಧರಿಸಿದೆ. ಅದರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದೆ........
ಕತೆ ಇಲ್ಲಿಗೇ ಮುಗಿಯಲ್ಲಿಲ್ಲ. ಕಳೆದ ವಾರ ನನ್ನ ಗೆಳತಿಯೊಬ್ಬಳು ಮನೆಗೆ ಬಂದಿದ್ದಳು. ಅವಳಿಗೆ ಮೊಬೈಲ್ ಕತೆಯನ್ನೂ ಅದು ಸತ್ತದ್ದನ್ನೂ ಹೇಳಿದೆ. ಆದರೂ ನನಗೇ ನಂಬಿಕೆ ಇರಲಿಲ್ಲ. ಅವಳಿಗೊಮ್ಮೆ ತೋರಿಸಬೇಕೆಂದು ಮೊಬೈಲನ್ನು ನೆಲಕ್ಕೆ ಜೋರಾಗಿ ಹಾಕಿದೆ.
ಮತ್ತೆ ಪುನಃ ಜೋಡಿಸಿದೆ.
ON ಮಾಡಿದೆ.
ಇಂತಹ ಅರೆ ಆರೋಗ್ಯವಂತರನ್ನು ನಾನೆಲ್ಲೂ ನೋಡಿಲ್ಲ.
ON ಆಯಿತು!
ಹೆಣ ಎದ್ದು ಬಂತು!!!!!!!!!!!