28 December, 2009

Cartoon ದೆವ್ವ

          ಆಗ ನಾನು ಏಳನೇ ತರಗತಿಯಲ್ಲಿದ್ದೆ. ನನ್ನ ತಂದೆ-ತಾಯಿ ನನ್ನನ್ನು boarding schoolಗೆ ಸೇರಿಸಿದ್ರು. ನಾನಲ್ಲದೆ ನನ್ನ ಕೆಲವು ಗೆಳತಿಯರೂ ಕೂಡ ನನ್ನೊಂದಿಗೆ ಸೇರಿದ್ರು. ಆದ್ರಿಂದ ಹೊಸ ಶಾಲೆಯಲ್ಲಿ ನಾನೊಬ್ಬಳೇ ಹೊಸಬಳಲ್ಲ ಎಂಬ ಸಮಾಧಾನ.

          ಆ ಶಾಲೆ ತುಂಬಾ ಹೆಸರುವಾಸಿಯೂ ಹಳೆಯದಾಗಿಯೂ ಇತ್ತು. ಆದ್ರೂ ನೋಡಲು ತುಂಬಾ ಚೆನ್ನಾಗಿತ್ತು. ಆ ಶಾಲೆಯ ಇತಿಹಾಸದಲ್ಲಿ ಏನು ನಡೆದಿತ್ತೋ, ಯಾರು ಸತ್ತಿದ್ದ್ರೋ ಏನೋ, ಅಲ್ಲಿ ದೆವ್ವಗಳಿವೆ ಎಂಬ ಸುದ್ದಿ ಗಾಳಿಯಲ್ಲಿ ತೇಲುತ್ತಾ ಇತ್ತು.  ಶಾಲೆಯ ಕಟ್ಟಡವನ್ನು ಪ್ರವೇಶಿಸಿದ ಕೂಡಲೇ ಅಲ್ಲಿ ಒಂದು ದೊಡ್ಡ ಹಾಲ್ ಇತ್ತು. ಬಲಗಡೆಗೆ ಪಾಠಶಾಲೆ, ಎಡಗಡೆಗೆ hostel. ನೆಲವಲ್ಲಾ ಬಿಳಿ ಬಣ್ಣ ಅಂದ್ರೆ ಬಿಳಿ ಬಣ್ಣದ tilesಗಳಿದ್ದವು. ಆದ್ರೆ ಅವುಗಳ ಮಧ್ಯೆ ಅಲ್ಲಲ್ಲಿ ಒಂದೋ ಎರಡೋ ಖಾಕಿ ಬಣ್ಣಕ್ಕಿಂತ ಸ್ವಲ್ಪ ಭಿನ್ನವಾದ tilesಗಳಿರುತ್ತಿದ್ದವು. ಆ ಶಾಲೆಯಲ್ಲಿ ಓದುತ್ತಿದ್ದವರು ಆ ಖಾಕಿ ಬಣ್ಣದಂತಿರುವ ಟೈಲನ್ನು ನಡೆಯುವಾಗ ಅಕಸ್ಮಾತ್ ತುಳಿದರೆ ದೆವ್ವಗಳು ಬರುತ್ತವೆಯೆಂದು ಹೇಳುತ್ತಿದ್ದ್ರು. ಆದ್ರೆ ನಾನು ನನ್ನ ಸ್ನೇಹಿತರು ಯಾರು ನಂಬುತ್ತಿರಲಿಲ್ಲ. ಪರೀಕ್ಷಿಸಲೆಂದು ಹಲವು ಬಾರಿ ತುಳಿದ್ರೂ ಏನೂ ಆಗ್ಲಿಲ್ಲ.

          ಇನ್ನೊಂದು ಕುತೂಹಲಕಾರಿ ವಿಷಯವೆಂದ್ರೆ ಕಟ್ಟಡವನ್ನು ಪ್ರವೇಶಿಸಿದಾಗ ಅಲ್ಲಿದ್ದ ಹಾಲಿನ ಮಧ್ಯದಲ್ಲಿದ್ದ ಒಂದು ದೊಡ್ಡ ಟೈಲ್. ತ್ರಿಕೋನದ ಆಕೃತಿಯಲ್ಲಿದ್ದ ಆ ಟೈಲ್ ಖಾಕಿ ಬಣ್ಣದಂತಿತ್ತು. ತ್ರಿಕೋನದ ತಳದಲ್ಲಿ ಕಾಯಿನ್ ಬೂತ್ ಗಳಲ್ಲಿ ಕಾಯಿನ್ ಹಾಕಲು ಇರುವ ರಂಧ್ರದಂತೆಯೇ ಒಂದು ರಂಧ್ರವಿತ್ತು. ಅದು ಸುಮಾರು ಒಂದು ಅಡಿ (feet) ಅಗಲ, ಒಂದು ಅಂಗುಲ (inch) ಉದ್ದವಿತ್ತು. ಈ ರಂಧ್ರದ ಕೆಳಗೆ ಒಂದು ಗುಂಡಿ (button) ಇತ್ತು. ಬಹುಶಃ ಅದು ದೆವ್ವಗಳ ಮನೆಯ Calling Bell ಆಗಿತ್ತೋ ಏನೋ. ಆ ಗುಂಡಿಯನ್ನು ಒತ್ತಿದ್ರೆ ಆ ರಂಧ್ರದಿಂದ ದೆವ್ವ ಬಂದೇ ಬರುತ್ತದೆಯೆಂದು ಅಲ್ಲಿದ್ದವರ ತತ್ತ್ವ. ಆ ಗುಂಡಿಯ ಮೇಲೆ EXIT ಎಂದು ಬರೆದಿತ್ತು. ಅಕ್ಷರಗಳನ್ನು ಬಿಟ್ಟರೆ ಬಟನ್ನಿನ ಉಳಿದ ಜಾಗವೆಲ್ಲಾ ಕೆಂಪು ಬಣ್ಣದ್ದಾಗಿತ್ತು. ಅಕ್ಷರಗಳು ಹಳದಿ ಬಣ್ಣದಲ್ಲಿದ್ದವು.

          ಏನೋ ನನಗೆ ಇದನ್ನು ಪರೀಕ್ಷಿಸಬೇಕೆಂಬ ಆಸೆ ಆಯ್ತು. ನನ್ನ ಸ್ನೇಹಿತರಿಗೆ ಹೇಳಿದಾಗ ಅವ್ರೂ ನನ್ ಜೊತೆ ಬರಲು ಒಪ್ಪಿದ್ರು. ಅಮಾವಾಸ್ಯೆಯ ರಾತ್ತ್ರಿಯನ್ನೇ ಆರಿಸಿಕೊಂಡೆವು. ಉಳಿದವ್ರು ಎಷ್ಟೇ ಬಾರಿ ಬೇಡವೆಂದ್ರೂ ಕೇಳದೆ ಹಾಲಿನ ಕಡೆಗೆ ಹೊರಟೆವು. ಹಾಲಿಗೆ ಬರುವಷ್ಟರಲ್ಲಿ ನನ್ನೊಂದಿಗೆ ಬಂದವರಲ್ಲಿ ಅರ್ಧದಷ್ಟು ಹೆದರಿ ಪರಾರಿಯಾದ್ರು. ಉಳಿದವ್ರು ಮೂರೋ-ನಾಲ್ಕೋ. ಆದ್ದದ್ದು ಆಗ್ಲಿ ಎಂದು ಸಾಹಸಕ್ಕೆ ಕೈಹಾಕಿದೆವು. ನಾನು ಆ EXIT ಗುಂಡಿಯನ್ನು ಕಾಲಿನಿಂದ ಒತ್ತಿದೆ. ಆಗ.................................................

          Bread Toasterನಿಂದ ಬ್ರೆಡ್ ಮೇಲಕ್ಕೆ ಚಿಮ್ಮುವಂತೆ ಬಿಳಿ ಬಣ್ಣದೊಂದು ಆ ರಂಧ್ರದಿಂದ ಹೊರಗೆ ಬಂತು. ಆದ್ರೆ ಅದು ಬ್ರೆಡ್ ಅಲ್ಲ. ದೆವ್ವ!!! ಯಾಕೋ ಈ ದೆವ್ವ ಹೆದರಿಕೆ ಹುಟ್ಟಿಸುವಂತಿರಲಿಲ್ಲ. Cartoon ದೆವ್ವ ಎನ್ನಬಹುದು. ಯಾಕೆಂದ್ರೆ ಅದು ಹಾಗೇ ಇತ್ತು. ಒಬ್ಬ ಮನುಷ್ಯನು ಬಿಳಿಬಟ್ಟೆಯನ್ನು ಮುಸುಕು ಹಾಕಿಕೊಂಡಂತೆ ಇತ್ತು. ಕೈಕಾಲುಗಳಿರದ ಬರೀ ಬಿಳಿ ಬಟ್ಟೆ. ಕಪ್ಪು ಬಣ್ಣದ ಎರಡು ಕಣ್ಣು, ಬಾಯಿ ದೆವ್ವದ ಸೌಂದರ್ಯ ಅಷ್ಡೇ. ವಿಚಿತ್ರವೆಂದ್ರೆ ಅದಕ್ಕೆ ಇಂಗ್ಲಿಷ್ ಬರುತಿತ್ತು. Why did you call me? ಎಂದು ಪ್ರಶ್ನಿಸಿತು. ಅದರ ಸ್ವರವು ಯಂತ್ರಮಾನವ(Robot)ನ ಸ್ವರದಂತಿತ್ತು. ನಮಗೆ ಸ್ವಲ್ಪವೂ ಭಯವಾಗಲಿಲ್ಲ. Who are you? ಎಂದು ನಾವು ಅದಕ್ಕೆ ಕೇಳಿದೆವು.

          ಇನ್ನೇನು ಅದು ತನ್ನ Flashbackಗೆ ಹೋಗಬೇಕು, ಆತ್ಮಕಥೆಯನ್ನು ಹೇಳಬೇಕೆನ್ನುವಷ್ಟರಲ್ಲಿ...............................
ಬೆಳಗಾಯಿತು, ಶಾಲೆಗೆ ಹೋಗಬೇಕು, ಏಳು ಎಂದು ಹೇಳಿತು. ಏನಿದು? ನನ್ನ ತಾಯಿಯ ಸ್ವರ ಕೇಳಿಸುತ್ತಿದೆಯಲ್ಲ? ಎಂದುಕೊಂಡು ಕಣ್ಣು ಬಿಟ್ಟೆ. ಏನಾಯಿತು ಎಂದು ಒಂದು ಕ್ಷಣ ಯೋಚಿಸಿದೆ. ಆಗ ನನ್ನ ವಾಸ್ತವ ಪ್ರಜ್ಞೆ ಎಲ್ಲಿ ಹೋಗಿತ್ತೋ ಗೊತ್ತಿಲ್ಲ ಆದ್ರೆ ಮರಳಿ ಬಂತು. ನಾನು ಯಾವುದೇ ದೆವ್ವಗಳ ಶಾಲೆಯಲಿಲ್ಲ ಎಂದು ನೆನಪಿಸಿಕೊಂಡು ನಿಟ್ಟುಸಿರು ಬಿಟ್ಟೆನು....................

ಆದ್ರೂ ಕನಸೇನೋ ತಮಾಷೆಯಾಗಿತ್ತು. ಅಲ್ವಾ?