27 July, 2009

ಶಾಶ್ವತವಾದ ನೆನಪು

ಮರೆಯಲಾಗದು ಈ ನೆನಹು
ಮನದಲ್ಲಿ ಶಾಶ್ವತವಾಗಿದೆ ಕುರುಹು
ಹೋದೆವು ಶಿವಮೊಗ್ಗೆಗೆ ಅಂದು
ನಿಸರ್ಗ ತಾಣವನು ನೋಡಲೆಂದು

ನೋಡಿದೆವು ಜೋಗ ಜಲಪಾತ
ಕೆಳಗಿತ್ತು ಎಂಟುನೂರಡಿಯ ಪ್ರಪಾತ
ಮೇಲಿನಿಂದ ಬೀಳುವಾಗ ಹಾಲು
ಕೆಳಗೆ ಬಿದ್ದ ಮೇಲೆ ನೀರಪಾಲು

ಘನಗಾಂಭೀರ್ಯದಿಂದ ಬಂದ ರಾಜ
ಜುಳುಜುಳನೆ ಬಂದಳು ರಾಣಿ
ಮಿಂಚಿನ ವೇಗದಲ್ಲೆ ಬಂದ ರಾಕೆಟ್
ಝಳಝಳಿಸುತ್ತಾ ಬಂದ ರೋರರ್

ಪಶ್ಚಿಮ ಘಟ್ಟದ ಸುಂದರ ತಾಣ
ಹಸಿರು ಬೆಳುಪಿನ ಸಮ್ಮಿಲನ
ಮೇಲೆ ನೀರಿನ ಧುಮ್ಮಿಕ್ಕುವ ಮಾಟ
ಕೆಳಗೆ ನೀರಿನ ಶಾಂತತೆಯ ನೋಟ


5 comments:

  1. tumba chennaagide ee kavana, shivamoggege hogi jogada jalapaatavannu nodi bandantaayitu

    ReplyDelete
  2. Hi!!!!!!!!!!!!!!! how are u? Very good poems. idella neene baradda????????????

    ReplyDelete
  3. This comment has been removed by the author.

    ReplyDelete
  4. Tumba chennagide ...good...

    Keep it up...

    ReplyDelete
  5. ಚೆನ್ನಾಗಿದೆ..ಬರೆಯುವುದನ್ನು ಮುಂದುವರಿಸಿ

    ReplyDelete